ನಿನ್ನೆ ರಾತ್ರಿ ಮಲಗೋ ಮುಂಚೆ ಹಾಗೆ ನನ್ನ ಮತ್ತು ನನ್ನ ಅಮ್ಮನ ನಡುವೆ ನಡೆದ ಮಾತುಗಳು... ಇಬ್ಬರು ತುಂಬ ಖುಷಿ ಪಟ್ವಿ. ಹಾಗೆ flashbackಗೆ ಹೋದೆವು. ಅವಳ ಈ ೬೧ರ ಇಳಿ ವಯಸಿನಲ್ಲಿ ಎ೦ತಹ ನಗು ಮತ್ತು ಹುಮ್ಮಸ್ಸು ಅರಳಿದ್ದು ನೋಡಿ ನಂಗೆ ತುಂಬ ಸಂತೋಷವಾಯಿತು. ಏನ್ mood ಬಂತೋ ಅಮ್ಮನಿಗೆ ತನ್ನ ಬಾಲ್ಯಾದ ದಿನಗಳನ್ನ ನೆನಸಿಕೊಳಲು ತೊಡಗಿದಳು. ತಾನು ಮೂರನೆ ಈಯತ್ತೆ ಇದ್ದಾಗ ತುಂಬಾ ಡಾನ್ಸ್ ಎಲ್ಲಾ ಮಾಡುತಿದ್ದಳಂತೆ. ಆಗ ಅವಳು ತನ್ನ ತಂದೆ ತಾಯಿ ಮತ್ತು ಅಣ್ಣರೊಂದಿಗೆ ಬೆಳಗಾವಿ ಹತ್ತಿರದ ಹಿರೆಬಾಗೆವಾಡಿಯಲ್ಲಿ ವಾಸಿಸುತಿದ್ದಳಂತೆ. ಚಿಕ್ಕ ಊರು ಇರೋದ್ರಿಂದ ಹಾಗು ನೋಡೊಕೆ ಸ್ವಲ್ಪ ತೆಳ್ಳಗೆ ಬೆಳ್ಳಗೆ ಇರೋದ್ರಿಂದ ಇವಳನ್ನೇ ಡಾನ್ಸ್ ಮಾಡೋದಕ್ಕೆ ಅವಳ ಟೀಚರ್ ಕರೆತಿದ್ದ್ರಂತೆ. ಇದನ್ನು ಹೇಳುವಾಗ ಅಮ್ಮನ ಮುಖ ನೋಡೋ ಹಾಗೆ ಇತ್ತು. ಮುದುಡಿದ ತಾವರೆ ಅರಳಿದ ಹಾಗೆ... :) ೭ ರಿಂದ ೮ ಡಾನ್ಸ್ ಗಳನ್ನ ಮಾಡ್ತಿದ್ದಳಂತೆ ಅಮ್ಮ ಆಗ. ಕೆಲ್ವಂದು ಹಾಡಿನ ಪಲ್ಲವಿ ಈಗಲೂ ಹೇಳಿದ್ಲು.. ಅಬ್ಬ ಏನ್ ನೆನಪಿನ ಶಕ್ತಿ ಅಮ್ಮನದು. ನಿಜ ನಾವು ಸಂತೋಷ ದಿಂದ ಕಳೆದ ದಿನಗಳು ಯಾವಾಗಲು ನಮ್ಮ ನೆನಪಿನಲ್ಲಿ ಹಸಿರಾಗಿರುತ್ತವೆ ಅನ್ನಲಿಕ್ಕೆ ಇದೇ ನಿದರ್ಶನ. ಆ ನಗು, ಸಂತೋಷ ಅಮ್ಮ ಎಲ್ಲೊ ಕಳೆದುಕೊಂಡು ಬಿಟ್ಟಿದ್ದಾಳೆ ಅನಿಸುತ್ತೆ. ಅದಕ್ಕೆ ಅಲ್ವೇ ನಾನು ಅವಳನ್ನು ತನ್ನ ತವರು ಮನೆ ಹೆಸರಾದ "ಸುನಂದಾ" ಎಂದು ಕರೆಯುವದು. ಅದು ಅವಳಿಗೂ ಸಂತಸ ಕೊಡುತ್ತದೆ ಅಂತ ನನಗೂ ಚನ್ನಾಗಿ ಗೊತ್ತು. ನಾನು ಅವಳ ಜೊತೆ ಜಗಳವನ್ನೂ ಆಡುತ್ತೇನೆ... ಅವಳಿಗೆ ನಾ ಹೇಳಿದ ವಿಷಯ ತಿಳಿದಿದ್ದಾಗ ನನಗೆ ಕೋಪ ಬರುತ್ತದೆ.. ಮತ್ತೆ... ಪಾಪ ಅಮ್ಮ ಅವಳು ಓದಿದ್ದೇನು.. ಅವಳ ತಿಳಿವಳಿಕೆ ಏನು ಎ೦ದು ನನಗೆ ಅನಿಸಿದಾಗ ... ನಕ್ಕು.. ಮತ್ತೆ ಅದನ್ನ ತಿಲಿಸಿಕೊಡುತ್ತೇನೆ.
ಅವಳೇ ಅಲ್ಲವೇ ನನ್ನ ಮೊದಲ ಗುರು... ನನಗೆ A B C D ಕಲಿಸಿದ್ದು, ಮತ್ತೆ This is Ramu, He is a Boy; This is His Shirt, it is White ಅಂತ ನಂಗೆ first standard ನಲ್ಲಿ ಹೇಳಿಕೊಟ್ಟಿದ್ದು... ನನಗೆ primary school ಅಲ್ಲಿ Algebra ಹೇಳಿಕೊಟ್ಟಿದ್ದು. ಅಮ್ಮನ favourite subject ಅಂದರೇ mathematics. ಅವಳಿಗೆ ಎಷ್ಟೋಂದು formulas ಇನ್ನು ನೆನಪಿವೆ. ಈಗ ನಾನು ಮುಂದೆ ಓದಿದ್ದೇನೆ ಅದಕ್ಕೆ ನನಗೆ ಅವಳಿಗಿಂತ ಕೆಲ್ವಂದು ವಿಷಯ ಜಾಸ್ತಿ ಗೊತ್ತು. ಆದರೆ ಮೊದಲು ನನಗೆ ಹೇಳಿಕೊಡುವಾಗ ಅವಳಿಗಿದ್ದ ಸಹನೆ ನನಗೆ ಈಗ ಏಕೆ ಇಲ್ಲ ಅಂತ ಬೇಸರವಾಗುತ್ತೆ ... :(
ಅವಳಿಗೆ ದಿನಾ newspaper ಓದದಿದ್ದರೆ ಏನೋ ದಿನಚರಿಯಲ್ಲಿ missing ಅನಸುತ್ತದೆ... :) ಅರೇಯ್ ಇವತ್ತು ಪೇಪರ್ ಅನ್ನೇ ಓದಲಿಲ್ಲವಲ್ಲ ಅಂತಾಳೆ. ಈಗಿನ ವೇಗದ ಜೀವನದಲ್ಲಿ ನಾವು ಎಷ್ಟು ಜನ ದಿನಪತ್ರಿಕೆ ಓದುತ್ತೇವೆ... ? ಹೊರಗಡೆ ರೂಮಿನಿಂದ ತಂದೆಯ ಕೂಗು "ಸಾಕು ಮಲಗಿ ಬೆಳಗ್ಗೆ ಬೇಗ ಏಳಬೇಕು...... ಅಂತ "ಹಾಗೆ ಮಾತಾಡ್ತಾ ಮಾತಾಡ್ತಾ ಯಾವಾಗ ನಿದ್ದೆಗೆ ಹೊದೆವೋ ಗೊತ್ತಿಲ್ಲ zz zzz ...

2 comments:
nice
thanks Santhosh.. :)
Post a Comment