May 4, 2012

"ಕಾಲ", Why this Kolaveri Di... ?

ನಮ್ಮ  ಮುತ್ತುರಾಜ್  ಅಂದ್ರೆ  Dr. ರಾಜ್ಕುಮಾರ್ರವರ  ಹಾಡು  "ಮುತ್ತಿನಂಥ  ಮಾತೊಂದು ಗೊತ್ತೇನ್ ಅಮ್ಮ , ನಾವು ಕಾಲಕ್ಕೆ  ತಕ್ಕಂತೆ ಕುಣಿಯಬೇಕು " ಯಮ್ಬಂತೆ ದಿನದ 24 ಗಂಟೆಗಳು, ವರ್ಷದ 12 ತಿಂಗಳೂ  ಮತ್ತು ನಮ್ಮ ಕೈ ಬೆರಳುಗಳು ಸಮನಾಗಿರುವುದಿಲ್ಲವೆಂದು  ಹೇಳುತ್ತವೆ. "ಬದಲಾವಣೆ ಪ್ರಕೃತಿಯ ನಿಯಮವೆಂಬ ಸತ್ತ್ಯದ ಕಡೆಗೆ ಮನಸ್ಸು ಹರಿಸುತ್ತದೆ.

ಆದರೆ ಬದಲಾವಣೆ ವಳ್ಳೆಯದಕ್ಕಾದರೆ ತೊಂದರೆ ಇಲ್ಲ. ನಮ್ಮನ್ನು track ಬಿಟ್ಟು ಕೆಳಗಿಳಿಸಿದರೆ ಅಲ್ಲಿ ಬರುವುದು ಸಮಸ್ಯೆ. ಈಗ ಮಕ್ಕಳು ಮಕ್ಕಳಾಗಿಲ್ಲ, ಹಿರಿಯರು ಹಿರಿಯರಾಗಿಲ್ಲ ಮತ್ತು ವಯೋವ್ರುದ್ಧರಲ್ಲಿ ಗಾಂಭೀರ್ಯತೆ ಕಡಿಮೆ ಆದಹಾಗಿದೆ. ಮಕ್ಕಳ ಮುಗ್ಧತೆ ಮಾಧ್ಯಮಗಳಲ್ಲಿ, video games, computer gamesಗಳ ಕಾರ್ಮೋಡದಲ್ಲಿ ಮರೆಮಾಚಿದೆ. ಯುವಕರ ಸಾಮಾಜಿಕ ಕಳಕಳಿ ಹಾಗೂ ಕರ್ತವ್ಯಪರತೆ weekend pubs, disco-techs, drugs, ಧೂಮಪಾನ, ಮಧ್ಯಪಾನ ಹಾಗು ಇನ್ನೇತರ ಸೋಪಾನದಲ್ಲಿ ಮುಳುಗಿದೆ. ಇನ್ನು ವಯೋವ್ರುಧ್ಹರನ್ನು ಕೆಳುವವವರೇ ಇಲ್ಲ. ಅಥವಾ ಅವರಿಗೆ ಹೇಳುವ-ಕೇಳುವ ವ್ಯವಧಾನ ಇಲ್ಲವಾಗಿದೆ. ಇಷ್ಟು ಅಸಹಾಕ ಹಾಗು ನಿರ್ಬಲವಾಗಿ ಭಾರತ ಇನ್ನವಾಗಲೂ ಇಲ್ಲವಾಗಿರಬೇಕು ಬಹುಶಃ .

ವಂದು ಕಡೆ ನಮ್ಮ ದೇಶ ವಿಶ್ವದಲ್ಲೇ ಹೆಚ್ಚಿನ ಯುವ ಜನಸಂಖೆಯುಳ್ಳ  ದೇಶವೆಂದು ಕೊಂಡಾಡುತ್ತಿದೆ. ಆದರೆ ಇನ್ನೊದು ಕಡೆ ಗುರಿ ಇಲ್ಲದ ದೇಶವಾಗಿಯು  ಪರಿಣಮಿಸುತ್ತಿದೆ ಅಲ್ಲವೇ? ಪಟ್ಟಣ ಬಿಡಿ ಸಣ್ಣ ಊರು, ಹಳ್ಳಿಗಳಲ್ಲೂ ಪಾಶ್ಚ್ಯಾತ್ಯವು ಅಷ್ಟ ದಿಕ್ಕಿನಲ್ಲೂ ಅಟ್ಟಹಾಸದಿಂದ ಮೆರೆಯುವದನ್ನು ಕಾಣುತ್ತಿದ್ದೇವೆ. ಇದು Law of Osmosis ಆಗಿದೆ. ಅಂದರೆ ದೊಡ್ಡ ಶೆಹರುಗಳಿಂದ ಪಾಶ್ಚ್ಯಾತಿಕರಣ ಹಳ್ಳಿಗಳವರೆಗೆ ಹರಿದು ಬರುತ್ತಿದೆ.

"ವೈದ್ಯೋ ನಾರಾಯಣೋ ಹರಿಹಿ" ಅಂತ ಅಂತಿದ್ರು ಆದ್ರೆ ಈಗ ವೈದ್ಯ ನರನನ್ನು ಹರಿದು ಇರಿಯುತ್ತಿದ್ದಾನೆ. ಶಾಲೆಗಳಲ್ಲಿ ಗುರು ಗುರುವಾಗಿಲ್ಲ ಶಿಷ್ಯ ಶಿಷ್ಯನಾಗಿಲ್ಲ. ನಮ್ಮ ಭವ್ಯ ಭಾರತದ ಅಪರೂಪದ ಗುರು-ಶಿಷ್ಯ ಪರಂಪರೆಯನ್ನು ಚಿವುಟಿ ಹಾಕುತ್ತಿದ್ದಾರೆ. ಎಲ್ಲ ಸಂಬಂಧಗಳು ಚಿಲ್ಲಾ-ಪಿಲ್ಲಿ ಆಗಿವೆ. ಅನೇಕ ಅಸಾಮಾಜಿಕ ಚಟುವಟಿಕೆಗಳು ನಮ್ಮ ಭಾರತಾಂಬೆಗೆ Cancer  ಹುಣ್ಣುಗಳಾಗಿ ಪರಿಣಮಿಸಿವೆ. ಎಷ್ಟೇ Radiotherapy ಹಾಗು Chemotherapyಗಳಿಂದ ಪ್ರಯೋಜನವಾಗುತ್ತಿಲ್ಲ.


ತಮಾಷೆಯ ಸಂಗತಿಗಳು ನನ್ನೊಂದಿಗೆ ನಡಿತಾನೆ ಇರುತ್ತವೆ, ಮೊನ್ನೆ ವಂದಿನ ನಾನು BMTC  ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆ. Driver  ಸಾಮಾನ್ಯವಾಗಿ ಬಂಗಳೂರಿನಲ್ಲಿ ಬುಸ್ಸುಗಳಲ್ಲಿ  FM  Radio  ಹಾಕುವುದು ಸಹಜ. ಅವನು Radio ಹಾಕಿದ್ದೆ ತಡ, "ಥೂ ನನ್ ಮಕ್ಳ ಗಂಡಸರ ನೀವು ಮೀಸೆ ಇದ್ದರೆ ? ಯೆಪತ್ರಲ್ಲೂ ಎದ್ದು ಬಂದ್ರಲ್ಲ ಅಣ್ಣ ಹಜಾರೆ..." ಅಂತ ಹಾಡು ಬಂದಬಿಡೋದಾ...? ನಾನು ಅದೇ ಮೊದಲ ಸಾರಿ ಆ ಹಾಡು ಕೇಳಿದ್ದು,  ಆ ಹಾಡಿಗಾಗಿ ಇಲ್ಲಿ ಕ್ಲಿಕ್ಕ್ಕಿಸಿ. ಆ ಸಾಲು ಕೇಳಿದ್ದೆ ತಡ driver , channel  change  ಮಾಡಿಯೇಬಿಟ್ಟ.   ಅವನಿಗಾದ  ಮುಜುಗರ ಅವನ ಮುಖ ದರ್ಶಿಸುತ್ತಿತ್ತು. ಜೊತೆಗೆ ಅದನ್ನು ಮುಚ್ಚಿಕೊಳ್ಳಲು ಈ ಸಿನೆಮದವ್ರು ನಮ್ಮ ಮಾನ ಮರ್ವಾದೆ ಕಳಿತಾರೆ ಮಗ ಅಂತ ತನ್ನ ಹತ್ತಿರ ನಿಂತಿದ್ದ ಸ್ನೇಹಿತನಲ್ಲಿ ಗುನುಗಿದ.  ನನಗೆ ನಗು ತಡೆಯಲು ಕಷ್ಟವಾಗುತಿತ್ತು. ಹೇಗೋ ನಗು ತಡ್ಕೊಂಡೆ... ಸತ್ಯದಿಂದ ಮನುಷ್ಯ ಹೇಗೆ ಓಡ್ತಾ ಇದ್ದಾನೆ ಅನ್ಸ್ತು.

1960ರಲ್ಲಿ   ನನ್ನ ಚಿಕ್ಕಪ್ಪ scooter  book ಮಾಡಿದ್ರಂತೆ, ಅದು ಅವರ ಕೈಗೆ 1972ರಲ್ಲಿ ಸಿಕ್ಕಿತಂತೆ .ಅ scooter  ಗಾಗಿ wait  ಮಾಡಿ ಪಡೆದ ಮಜವೇ ಬೇರೆ ಅಂತ ನೆನ್ಸಕೊಂಡರು. ಅವ್ರ ಬಂಧು-ಬಾಂಧವರು, ಸ್ನೇಹಿತರು, ನೆರೆ-ಹೊರೆಯವರು ಅವರನ್ನು  ಹೆಮ್ಮಯಿಂದ ನೋಡುತ್ತಿದ್ದರಂತೆ. ಆದರೆ ಅದೇ ಈಗ car ತೆಗೆದ್ಕೊಂಡ್ರೂ  ಆ ಖುಷಿ ಇಲ್ಲ ಅಂತ ಹೇಳ್ತಿತ್ದ್ರು. ಇಲ್ಲಿ ವಂದಂಶ ನಾವು ಗಮನಿಸಬೇಕು. ಆಗ ಜನರಿಗೆ ತಮ್ಮ ಸ್ನೇಹಿತನೊಬ್ಬನ  ಏಳಿಗೆ ಆದರೆ ಸಂತೋಷ ಮತ್ತು ಹೆಮ್ಮೆ ಪಡುತ್ತಿದ್ದರು, ಅದೆಲ್ಲ ಅಪರೂಪದ ಸಂಗತಿ ಆಗಿತ್ತು. ಅದೇ ಈಗ ದ್ವೇಷ, ಮಾತ್ಸರ್ಯಗಳಲ್ಲಿ ಪರಿವರ್ತಿಸಿದೆ ಹೆಚ್ಚಾಗಿ.

ಈ MNCಗಳು ನಮ್ಮನ್ನಾಳುತ್ತಿವೆ ಎಂದು ಎಷ್ಟು ಜನರು ಯೋಚಿಸುತ್ತಿದ್ದಾರೆ? ಅವು ನೀಡುವ ಭಿಕ್ಷೆಯನ್ನು ಆನಂದದಿಂದಲೇ ಸ್ವೀಕರಿಸುತ್ತಿದ್ದೇವೆ.ಅದೇ ಶ್ರೇಷ್ಠ ಎಂದು ಕಲ್ಪನಾ ಲೋಕದಲ್ಲಿದ್ದೇವೆ. ನಮಗೆಲ್ಲರಿಗೂ ಆಳೋದು ತಿಳಿಯುತ್ತಿಲ್ಲ ಪೂರ್ವದಿಂದ ಬಂದ ಪರಂಪರೆಯನ್ನು ಮುಂದುವರೆಸಿಕೊಂಡು ನಡೆಯುತ್ತಿಲ್ವೆ?

ಹಿಂದೆ ನಮ್ಮ ದೇಶಕ್ಕೆ ವಬ್ಬ ವಿವೇಕಾನಂದ, ವಬ್ಬ ಸುಭಾಷಚಂದ್ರ ಭೋಸ್, ವಬ್ಬ ಗಾಂಧೀಜಿ ಸಾಕಾಗಿದ್ದರು. ಆದರೆ ಈಗ ಬರೀ  fancy  dress competitionಗೆ ಮಾತ್ರ ಸೀಮೀತವಾಗದೆ ಪ್ರತೀ ಮನೆ ಮನೆಯಲ್ಲೂ ಇವರುಗಳು ಜನಿಸಬೇಕಾಗಿದೆ.  ಕೊನೆ ಪಕ್ಷ ಉತ್ತಮ ವ್ಯ್ವಕ್ತಿತ್ವ ಉಳ್ಳವರು ತಮ್ಮ ಸುತ್ತ-ಮುತ್ತಲಾದರು   Potassium Permanganate ( ಹೇಗೆ ಕಲುಷಿತ ನೀರನ್ನು ತಿಳಿ ಆಗಿಸುತ್ತದೆಯೋ)  ಥರ    ತಮ್ಮ ವಾತಾವರಣವನ್ನಾದರೂ ಸ್ವಚ್ಚಗೊಳಿಸಬೇಕಾಗಿದೆ.

ಹಿರಿಯರಲ್ಲಿ ಈ ಕುರಿತು ಚಿಂತನೆ ಮಾಡಿದಾಗ ನಂಗೆ ಸಿಕ್ಕ ಉತ್ತರ "ಕಾಲಾಯ ತಸ್ಮ್ಯನ್ ನಮಃ " ಎಂದು, ಎಲ್ಲ ಕಾಲದ ಮೇಲೆ ಹೊರೆ ಹೇರಿ ಕುಳಿತರು. ಇದು "ಬೇಲಿನೆ  ಎದ್ದು ಹೊಲ ಮೇಯ್ದಂತೆ" ಆಗ್ಲಿಲ್ವೇ?

ಆ ತಾಯಿ ಶಾರದೆಯ ಶುಭ್ರ ವಸ್ತ್ರದಂತೆ ನಮ್ಮ ಅಮೂಲ್ಯ ಆಧ್ಯಾತ್ಮಿಕ ಶಿಕ್ಷಣ ಮೊದಲಿಂದ ಮೂಡಬೇಕಾಗಿದೆ. ಮತ್ತೆ ಅದೇ ನಮ್ಮ ಮೂಲ ಬುನಾದಿ ಆಗಬೇಕಿದೆ. ಇದು Kolaveri Di  ಹಾಡಿನಂತೆ ಸಾಂಕ್ರಾಮಿಕವಾಗಿ ಎಲ್ಲೆಡೆ ಹರಡಬೇಕು. ಮಕ್ಕಳ ಮುಗ್ಧ ಮಂದಹಾಸ ಮತ್ತೆ ಮೂಡಬೇಕು, ಹಿರಿಯರ ಜ್ಞ್ಯಾನ  ವಾಣಿ ಕೇಳಿ ಬರಬೇಕು ಅಂತ ನನ್ನ ಅನಿಸಿಕೆ. ಹಳೆಯ ವಳ್ಳೆ  ಸಂಪ್ರದಾಯದ ಜೊತೆಗೆ ಹೊಸ ಜ್ಞ್ಯಾನ ವನ್ನು ಅಪ್ಪಿಕೊಳ್ಳಬೇಕು.

ಹಣದ ಆಲಯಗಳಾಗದೆ ಜ್ಞ್ಯಾನ  ದೇಗುಲಗಳಾಗಲಿ  ಹೆಚ್ಚು
ಎಬ್ಬಿಸಲಿ ನಮ್ಮಲ್ಲಿ ಸ್ವಾಭಿಮಾನದ ಕಿಚ್ಚ್ಹು 
ಹರಿಸಲಿ ಆದರ್ಶ ಸಾಹಸಗಳ ನೆತ್ತರು 
ಆಗಲಿ ನಮ್ಮ ಭಾರತ ಸುವರ್ಣ ತೇರು

ಇದು  "ಕಾಲದ " ಬಗ್ಗೆ ನನ್ನ  Kolaveri Di ...ಏನು ನಿಮ್ಮ ಅಂಬೋಣ?