Mar 7, 2011

ಸ್ವಾದಿಯ ಸ್ವಾದ ಸವೀಇರಿ...

ಕೆಲವರಿಗೆ ಗೊತ್ತಿರಬಹುದು ಇನ್ನು ಕೆಲವರು ಕೇಳಿರಬಹುದು ಮತ್ತು ಇನ್ನು ಕೆಲವರು ಕೇಳದಿರಬಹುದು... ಮತ್ತೊಮ್ಮೆ ಪರಿಚಯ ಮಾಡ್ಕೊಳೋದ್ರಲ್ಲಿ ಏನು ತಪ್ಪಿಲ್ಲ ಬಿಡಿ.. :-) ಸ್ವಾದಿ ಒಂದು ಚಿಕ್ಕ ಊರು, ಸಿರಸಿ ತಾಲೂಕಿನ ಒಂದು ಪುಟ್ಟ ಗ್ರಾಮ ಅಂತ ಹೇಳಬಹುದು. ಶ್ರೀ ವಾದಿರಾಜ ಸ್ವಾಮಿಗಳ ಸನ್ನಿಧಾನ. ಬನ್ನಿ ಪುಣ್ಯ ಕ್ಷೇತ್ರದ ದರುಶನ ಮಾಡೋಣ...

ಮಠದ ಒಂದು ವಿಹಂಗಮ ನೋಟ...ಹೆಸರೇ ಹೇಳುತ್ತದೆ ಅಲ್ಲವೇ.. ಭೂತ ರಾಜರು ಅಂದರೆ ಸಾಕ್ಷಾತ ಪರಶಿವ...
ಯಾಗ ಶಾಲೆ - ಹೋಮ ಹವನಗಳು, ಮದಿವೆ ಮುಂಜಿಗಳು ನಡಿಯೋ ಸ್ಥಾನ...

ಭಕ್ತರ ಭಕ್ತಿಯ ಬೇಡಿಕೆಯ ಗಂಟುಗಳು...

ಮಠದ ಒಂದು ಪ್ರದಕ್ಷಿಣೆ ಹಾಕೋಣ ಬನ್ನಿ...


ನಾಗ ಬಲಿ ಸ್ಥಾನ...

ದೇವಸ್ಥಾನದ ಒಂದು ಪಕ್ಷಿ ನೋಟ...


ಸೇವೆಗೆ ಸಂಕಲ್ಪ ಮಾಡಿಸುತ್ತಿರುವ ಆಚಾರ್ಯರು... ಇವರು ಸಾಮಾನ್ಯರಲ್ಲ.. ಪ್ರತಿನಿತ್ಯ ಪೂಜೆ ಪುನಸ್ಕಾರ ಮಾಡುವದೆಂದರೆ ಸಾಮಾನ್ಯವಾದ ಕೆಲಸವೇ? ಅದಕೆಷ್ಟು ಸಾಧನೆ ಬೇಕು... ಇಷ್ಟು ದೊಡ್ಡ ಮಠದ ಆವರಣವನ್ನು ಸುತ್ತಿ ಪೂಜೆ ಮಾಡೋದಕ್ಕೆ ತಕ್ಕ ದೇಹ ಸಾಮರ್ಥ್ಯನು ಬೇಕು... ಆಚಾರ್ಯರು ಜೊತೆಗೆ ಜೋತಿಷ್ಯ ಶಾಸ್ತ್ರ ಪಂಡಿತರು ಹೌದು...

ಇದೆ ವಾದಿರಾಜರ ಮೂಲ ವೃಂದಾವನ.. ನಮೋನ್ ನಮಃ ಗುರುಗಳೇ...

ಶ್ಲೋಕಗಳನ್ನು ಪಠಸುವಲ್ಲಿ ನಿರತ ಮಠದಲ್ಲಿ ಓದುವ ಮಕ್ಕಳು


ವೆಂಕಟರಮಣ ದೇವಸ್ಥಾನ...

ದೇವಸ್ಥಾನದ ಒಂದು ವಳನೋಟ...

ಸೌಭಾಗ್ಯವತಿಯರು ಹೂವಿನ ಮಾಲೆಯನ್ನು ಕಟ್ಟುವ ಸೇವೆಯಲ್ಲಿ ತೊಡಗಿರುವರು...

ದೇವರ ಉಪಕರಣಗಳನ್ನು ತೊಳೆಯುವದು ಒಂದು ಸೇವೆನೆ...

ಎಲ್ಲ ಪೂಜೆ ಸೇವೆಯ ನಂತರ ದೇವರ ಪ್ರಸಾದ ಸೇವಿಸುತ್ತಿರುವ ಭಕ್ತಾದಿಗಳು...
ಸಂಜೆ ಮಂಗಳಾರತಿಯ ವೇಳೆಗೆ ದೀಪೋತ್ತ್ಸವ... ಮಂಗಳಾರತಿ ವೇಳೆಗೆ ಮೊಳಗುವ ಘಂಟಾನಾದ ಮನಸಿನಲ್ಲಿ ಅಡಗಿರುವ ಭೂತಗಳನ್ನು ಹೊಡೆದೋಡಿಸುತ್ತ, ಕಣ್ಣಿನಿಂದ ಆನಂದ ಭಾಸ್ಪಗಳ ಸುರಿಮಳೆ ಆದ ಅನುಭ ನನಗಾಇತು... ಆ ಪರಮಾತ್ಮನ ದಶಾವತಾರದ ಹಾಡು ಹಾಡುವ ಆ ತಾಯಿ ತನ್ನ ಪ್ರತಿನಿತ್ಯದ ಗಾನ ಸೇವೆ ಸಲ್ಲಿಸುವವಳೇ ಧನ್ಯ... ಇಲ್ಲಿ ಆ ಹಾಡು ಪೋಸ್ಟ್ ಮಾಡಲು ಆಗಲಿಲ್ಲ.. ಅದನ್ನು ಕೇಳಲು ಅಲ್ಲಿಗೆ ಹೋಗಬೇಕು... ಆಹಾ! ಎಂತಹ ಅದ್ಭುತ ಕಂಠ ಹಾಗು ಭಕ್ತಿಭರಿತವಾದ ಹಾಡು... ಧನ್ಯೋಸ್ಮಿ!!! ನಾನು ನನ್ನ ಸ್ನೇಹಿತೆ ಆ ಹಾಡನ್ನು ನಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದೆವು...

ನಿತ್ಯದ ಕೊನೇಯ ಪೂಜೆ ಭೂತ ಬಲಿ...

ಪ್ರಸಾದ ಚೀಲ...

ನಡೆಇರಿ ವಾದಿರಾಜರು ತಪಸ್ಸು ಮಾಡಿದ ತಪೋವನಕ್ಕೆ ಹೋಗೋಣ...ಇಲ್ಲಿದೆ ಹೈಗ್ರೀವರ (ಕುದುರೆ ಕಾಲು) ಹಿಂದಿನ ಪಾದ, ಮುಂದಿನ ಎರಡು ಪಾದಗಳು ವಾದಿರಾಜರ ಹೆಗಲ ಮೇಲಿಟ್ಟು ಅವರು ತಯಾರಿಸಿದ ಹೈಗ್ರೀವವನ್ನು ಸೇವಿಸುತ್ತಿದ್ದರು ಎನ್ನಲಾಗಿದೆ..

ಇಲ್ಲಿ ವಾದಿರಾಜರು ಹುರಣವನ್ನು ರುಬ್ಬುತ್ತಿದ್ದರಂತೆ, ದೇವರಿಗೆ ನೈವೈದ್ಯ ಮಾಡಲು...

ಸಿರಸಿ ಮಾರಿಕ್ಮ್ಬ ದೇವಸ್ಥಾನದ ಒಂದು ನೋಟ.. ವಳಗಡೆ ದೇವಿಯ ಫೋಟೋ ತೆಗೆಯುವಂತಿಲ್ಲ... :-(

ಸ್ವರ್ಣವಲ್ಲಿ ಮಠದ ವಳಾಂಗಣ...

ಸ್ವರ್ಣವಲ್ಲಿ ಮಠದ ಧ್ಯಾನ ಮಂದಿರ...

ಹುಲೇಕಲ್ ವ್ಯಸರಾಯರ ವೃಂದಾವನ...

ಕೊನೇಯದಾಗಿ ಸಹಸ್ರಲಿಂಗದ ದರ್ಶನವೂ ಆಯಿತು ...
ಸ್ಥಳಕ್ಕೆ ಹೋದ ಮೈಮನಸುಗಳೇ ಧನ್ಯ. ಆದರೆ ವಮ್ಮೆ ಆದರು ಹೋಗಿ ಬನ್ನಿ... ಅಲ್ಲಿಯ ಪವಿತ್ರತೆಯನ್ನು ನಿಮ್ಮಲ್ಲಿ ತುಂಬಿಕೊಳ್ಳಿ, ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಿ...
ನನ್ನನು
ಮೇಲಿಂದ ಮೇಲೆ ತಮ್ಮ ದರುಶನ ಭಾಗ್ಯ ಕೊಡಲಿ ಎ೦ದು ಗುರುಗಳಲ್ಲಿ ನನ್ನ ಪ್ರಾರ್ಥನೆ... ಬ್ಲಾಗ್ ಮೂಲಕ ನೋಡೋ ಜನರಿಗೂ ದರುಶನ ಭಾಗ್ಯ ಹಾಗು ಗುರುಗಳ ಆಶೀರ್ವಾದ ಲಭಿಸಲಿ .

- ಹರಿ ಓಂ -