ಆಸೆಯ ಮೂಟೆ ಕಟ್ಟಿಕೊಂಡು ನಿನ್ನ ಹಿಂದೆ,
ಜೊತೆಗೆ ತವರ ಅಕ್ಕರೆಯ ಹಾರೈಕೆ ಕರೆ ತಂದೆ...
ನಿನಗಾಗಿ ನನ್ನ ಹೆತ್ತವರ ಬಿಟ್ಟು ಬಂದೆ.
ಆದರ್ಶ ಬಾಳ ಸಂಗಾತಿ ಬೇಡಿದ್ದೆ ಆ "ಸುರನಲ್ಲಿ",
ನೀನಾಗಿ ಬಂದೆ "ಅಸುರ" ನನ್ನ ಜೀವನದಲ್ಲಿ...
ನನ್ನಾಸೆಯ ಕರುಳ ಬಳ್ಳಿ ಬೆಳೆಸಬೇಕೆಂದಾಗ;
ಅದನಲ್ಲೇ ಚಿವುಟಿ ಹಾಕುತಿದ್ದೆ ನೀನಾಗ...
ಪದೇ ಪದೇ ತಿದ್ದುತ್ತಿದ್ದೆ, ತಿಳಿಸುತ್ತಿದ್ದೆ ನಾನೇ ನನ್ನನ್ನ,
ಮರಳಿ ಮರಳಿ ಗುದ್ದುತ್ತಿದ್ದೆ ನೀನನ್ನ ಅಸ್ತಿತ್ವವನ್ನ...
ವಿಶಾದಿಸದೆ ಸಾಗಿಸಿದೆ ಮಸಣಕ್ಕೆ ನನ್ನ ದಿಬ್ಬಣವನ್ನ,
ಅಂದು ಉಟ್ಟ ಬಿಳಿ ಸೀರೆ, ಇಟ್ಟ ಕರಿ ಬೊಟ್ಟು;
ಇಂದಿಗೂ ಸಂಸ್ಕಾರವಾಗದ ಆ-ಕಾಯ-ಅಲೆಯುತ್ತಿದೆ,
ಅದು ಎಲ್ಲೆಲ್ಲೋ ಎಲ್ಲೆಲ್ಲೋ ಎಲ್ಲೆಲ್ಲೋ...
- ಪೂರ್ಣಿಮಾ
(ನನ್ನ ಮೊದಲ ಕನ್ನಡ ಕವನ )
(ನನ್ನ ಮೊದಲ ಕನ್ನಡ ಕವನ )
No comments:
Post a Comment