Nov 7, 2009

PG ದಿನಗಳು...

ಅಂತು ಇಂತೂ PG ಬಂತು...sss ಎಂಬ remix ಹಾಡು ನಾನು ಜೋಡಿಸಿದೆ. PG ಅಂದರೆ Post Graduate ಅಲ್ಲಾ, Paying Guest ಅಂತ. PGನಲ್ಲಿನ ಒಂದು ಚಿಕ್ಕ ಅನುಭವ ಇಲ್ಲಿದೆ ಓದಿ. "ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ" ಎಂಬ ಗಾದೆ ನನಗೆ ಸಮಯದಲ್ಲಿ ತುಂಬ ಅನ್ವೈಸುತ್ತದೆ. ನನ್ನ ಅತ್ತೆ ಮಾವರೊಂದಿಗೆ ಸರಿಹೋಗದೆ ಇರುವುದು, ಕೆಲಸ ಸಿಕ್ಕು ದೂರ ಹೋಗಬೇಕೆಂಬ ನನ್ನ ಆಸೆ, ಎಲ್ಲವೂ ನಡೆದುದಕ್ಕೆ ವಳಿತೇ ಆಯಿತು. ಅದಕ್ಕೆ ಅನಿಸುತ್ತೆ "ಎಲ್ಲವೂ ಆಗುವದು ವಳ್ಳೀತಕ್ಕೆ ಎಂಬ ಮಾತು ನಿಜ... ನನಗು PGಅಲ್ಲಿ ಇರುವ ಅನುಭವ ಅವಶ್ಯವಿತ್ತು ಅನಿಸುತ್ತೆ. ಟ್ಟಿನಲ್ಲಿ ಅತ್ತೆ ಮಾವನ ಕಾಟ ಹಾಗು ಮಂಕು ಗಂಡನ ತಲೆ ನೋವು ಬಿಟ್ಟು PGಗೆ ಬಂದಾಯಿತು. ಇದು ನನಗೆ ಕನಸಿನಲ್ಲೂ ಅಂದುಕೊಂಡಿರದ ಸಂಗತಿ.
PGಗೆ ಬಂದ ಕೂಡಲೇ ನನ್ನ ಮನಸ್ಸಿಗೆ ಯಾಕೋ ಕಸಿವಿಸಿ ಏನೋ ಕಳೆದುಕೊಂಡ ಭಾವ, ಮುಂದೆ ಏನು ಎ೦ದು ಒಂದೆಡೆ ಇದ್ದರೆ, ನನ್ನ ಜೀವನದ ಅಮೂಲ್ಯ ಕ್ಷಣಗಳನ್ನ ಬಲಿ ಕೊಟ್ಟ ಭಾವ ಇನ್ನೊಂದು ಕಡೆ. ಈ ನನ್ನ ದ್ವಂದ್ವ ಮನಸ್ಸಿನ ಸ್ಥಿತಿ ನನಗೇನು ಹೊಸದಲ್ಲ. ಆದರೂ ಮದುವೆ ಮಾಡಿಕೊಂಡು ನಾನೇನು ಸುಖ ಪಡಲಿಲ್ಲ, ನನ್ನಿಂದ ನನ್ನ ಹೆತ್ತವರಿಗೂ ಸಂತಸ ಸಿಗಲಿಲ್ಲ. ಬಹುಷಃ ಇದು ನನ್ನ ಪೂರ್ವ ಜನ್ಮದ ಪಾಪ ಕರ್ಮಗಳೆನಿಸುತ್ತದೆ. ಯಾಕೆಂದರೆ ಈ ಜನ್ಮದಲ್ಲಿ ನಾನು ಯಾರಿಗೂ ದ್ರೋಹ ಬಗೆದಿಲ್ಲವೆಂದ ಮೇಲೆ ಇದು ನನ್ನ ಪೂರ್ವ ಜನ್ಮದ ಕರ್ಮವೇ ಸರಿ ಎನಿಸುತ್ತದೆ.

ನನ್ನವರು ನನಗೆ PGಗೆ ತಲುಪಿಸಲು ಬಂದಾಗ ಕಣ್ತುಂಬ ನೀರು ತುಂಬಿಕೊಂಡಿದ್ದರು. ನನಗೆ ಅದು ನಿಜವೋ ನಾಟಕವೋ ತಿಳಿಯಲಿಲ್ಲ. ಆದರೆ ಅದನ್ನು ನಿಜ ಎಂದು ನಂಬಲು ಆಸೆ. ಆದರೆ ನಾನು "ಆಸೆಯೇ ದುಖ್ಹಕ್ಕೆ ಮೂಲ" ಎಂಬುದೂ ಮರೆತಿರಲಿಲ್ಲ. ಅವರ ದುಖ್ಹ ನೋಡಿ ಮನಸ್ಸಿಗೆ ತುಂಬಾ ಬೇಜಾರ್ ಆಯಿತು. ಆದರೆ oದೆಡೆ ಪಂಜರದಿಂದ ಹೊರ ಬಂದ ಪಕ್ಷಿಯ ರೀತಿ ಮನಸ್ಸಿನ ಸ್ಥಿತಿ ಇತ್ತು. ಅವರು ತಮ್ಮ ಕೆಲಸದ ಸಲುವಾಗಿ ತುಂಬಾ ದಿನಗಳ ಮಟ್ಟಿಗೆ ಊರಿಂದ ಹೊರಗೆ ಹೋಗಬೇಕಾಗಿ ಬಂದದ್ದೆ ತಡ, ಧಿಡಿರನೆ PGಗೆ ಬರುವ ನಿರ್ಧಾರ ತೆಗೆದುಕೊಂಡೆ. ಅದಕ್ಕೆ ನನ್ನವರು ಹೇಳ್ತಾರೆ... ನೀನು ನನ್ನ ಪರಿಸ್ಥಿತಿಯನ್ನು ದುರುಪಯೋಗ ಪದೆಸಿಕೊಂಡೆ ಅಂತ. ಏಕೆಂದರೆ ನಾನು ಆಮೇಲೆ ಮರಳಿ ಅತ್ತೆ ಮನೆಗೆ ಹೋಗಲೇ ಇಲ್ಲ.

ಆದರೆ ನಂಗೇನು ತಿಳಿದಿತ್ತು "ಪಾಪಿ ಸಮುದ್ರಕ್ಕೆ ಹೋದರು ಮೊಣಕಾಲಷ್ಟೇ ನೀರು" ಅನ್ನೋ ಹಾಗೆ ಆಯಿತು. ಸ್ವಲ್ಪ ದಿನ ಎಲ್ಲ ಚೆನ್ನಾಗಿ ಅನಿಸುತ್ತಿತ್ತು. ಇದರ ಅರಿವು ಇದ್ದರೂ ಮನೆಯ ಉದ್ವಿಗ್ನ ವಾತಾವರಣದಲ್ಲಿ ಮರೆತಿರಬೇಕು ನನ್ನ ಮನಸ್ಸು. ಮನೆಯಗಿಂತ ಎಷ್ಟೋ ವಾಸಿ ಅನಿಸುತ್ತಿತ್ತು.

ಹಾಳಾದ್ದು ನನಗೆ ಆ fan ಇಲ್ಲದಿದ್ದರೆ ನಿದ್ದೆನೇ ಬರೋದಿಲ್ಲ. ಚಿಕ್ಕಂದಿನಿಂದಲೂ fanನಿನ ಅಭ್ಯಾಸ. ಆದ್ದರಿಂದ ಯಾರ ಮನೆಗೆ ಹೋಗುವ ಮುನ್ನ ಅವರ ಮನೆಯಲ್ಲಿ fan ಇದೆಯೋ ಇಲ್ಲವೋ ಅಂತ ಖಚಿತ ಪಡೆಸಿಕೊಂಡೆ ಹೋಗೋದು. ಹಾಗೆ ಬೆಳೆದವಳು ನಾನು. Fan ಇಲ್ಲದಿದ್ದರೆ ಉಸಿರೇ ನಿಂತ ಹಾಗೆ ಆಗುತ್ತೆ. ಇದೇ ನಾನಿದ್ದ PG room ಅಲ್ಲಿ ಜಗಳಕ್ಕೆ ಕಾರಣವಾದದ್ದು. ಒಬ್ಬಳಿಗೆ fan ಇದ್ದರೆ ಅಲರ್ಜಿ, ಇನ್ನೊಬ್ಬಳಿಗೆ ಇಲ್ಲದ್ದಿದ್ದರೆ ಅಲರ್ಜಿ. ವತ್ಟ್ನಲ್ಲಿ fanನಿನ funda ಆಯಿತು. Fan ನಿಂತ ಕ್ಷಣ ಎಲ್ಲರ ಜೊತೆ ಮಾತು ನಿಂತು ಹೋಯಿತು. ಸ್ಫೂರ್ತಿ, ಮಧುಮಿತ ತುಂಬಾ ಜೋರು. ಅವರ ಜೊತೆ ಸೇರಿ ಶ್ವೇತಾನೂ ಹಾಗೆ ಅವರ ಜೊತೆಗೂಡಿದಳು. ಕೊನೆಗೆ ನನಗೆ ಪ್ರಾಣ ಸಂಕಟ ಆಯಿತು. ಬಹುಷಃ ನನ್ನ ಅವರ ನಡುವಿನ ಭಾವನೆಗಳ, ವಯಸ್ಸಿನ ಅಂತರವೇ ಕಾರಣ ಅಯಿತೋ ಏನೋ ನಮ್ಮ ಭಿನ್ನಾಭಿಪ್ರಾಯಕ್ಕೆ. ನಾನು ಯಾವತ್ತು ಇದರ ಬಗ್ಗೆ ತಲೆ ಕೆಡೆಸಿ ಕೊಂಡಿದ್ದೇ ಇಲ್ಲ. ಆದರೆ ನನ್ನ ಒಂಟಿತನ ಇನ್ನೂ ಹೆಚ್ಚಿತು.

ನನ್ನ ಬಾಲ್ಯ ಸ್ನೇಹಿತೆ ಕೂಡ ಅವಳ ಅಮ್ಮನ ಮನೆಗೆ ಹೋಗಿದ್ದಳು. ಅವಳು ಅಲ್ಲೇ ಪಕ್ಕದ room ಅಲ್ಲೇ ಇರುತ್ತಿದ್ದಳು. ಅವಳಿಗೂ ಪಾಪ ತುಂಬಾ ತೊಂದರೆಗಳಿದ್ದವು. ಜೀವನದಲ್ಲಿ ತುಂಬಾ ನೋವು ತಿಂದಿದ್ದಳು. ಅವಳು ನಾನು ತುಂಬಾ ಅನ್ನ್ಯೋನ್ನ್ಯವಾಗಿದ್ದೆವು. ಅದೇ ಮನಸ್ಸಿಗೆ ಸ್ವಲ್ಪ ಸಮಾಧಾನವಿತ್ತು. ಅವಳಿಗೂ ನನ್ನ roommatesಗಳ ಬಗ್ಗೆ ಚನ್ನಾಗಿಗೊತ್ತಿತ್ತು. ಈಡಿ PGಗೆ ನನ್ನ roommates ಜಗಳಕ್ಕೆ famous ಇದ್ದದ್ದು ನನಗೆ ಆಮೇಲೆ ತಿಳೀತು. ನನ್ನ ಒಂಟಿತನ ನನ್ನ ಬೆನ್ನು ಬಿಡಲ್ಲಿಲ್ಲ... ಕೆಲಸ ಚನ್ನಾಗಿದೆ, ಆದರೆ ಮನಸ್ಸು ಚೆನ್ನಾಗಿಲ್ಲ. ಮನಸಿದ್ದರೆ ಎಲ್ಲಾ ಚೆನ್ನ. ಮನಸಿದ್ದರೆ ಈ ಜಗತ್ತು. ನನ್ನ ಮನಸ್ಸು ಇನ್ನೂ ಏನೋ ಹುಡುಕಾಟದಲ್ಲಿಯೇ ಇದೆ. ಅದು ಏನು ಅಂತ ಇನ್ನೂ ತಿಳಿದಿಲ್ಲ. ಹೀಗೆ ನನ್ನ friend ತನ್ನ ಅನಿಸಿಕೆ ನನ್ನೊಂದಿಗೆ ಹಂಚಿಕೊಂಡಳು. ಈ ಜೀವನ ಏನು ಅನ್ನೋದು ಬಹುಶ ಯಾರಿಗೂ ಇನ್ನೂ ತಿಳಿದಿಲ್ಲ ಪಾಪ ಇನ್ನು ನೀನು ನೊಂದ ಹೆಣ್ಣು ಇನ್ನೂ ನಿನಗೇನು ತಿಳಿದಿತ್ತು ಬಿಡು ಅಂದೆ...


6 comments:

Dayanand said...

hello, i am following ur blog regularly but cold not post any comments as i am not a good writer/critic. ur blog abt Hombala is really good and can impress any body abt ur style of writing.the last blog PG.... is also good in writing but really sorry for u. hope the time will turn in right manner. y u say ur alone, u have ur wounderfull roommmates and good child hood friend and above all the perfect job to kill the time and avoid the loneliness.
keep writing in the same spirit...

Meethi Imli said...

Dayanand thanks so much for your comments. Hey am not in hostel.. its a story f my friend. I did not understand what are you talking about Hombala? i think i haven't written anything about that.. :( please let me know what are you talking about... :) i will be happy to reply

Dayanand said...
This comment has been removed by the author.
Dayanand said...

i think the blog was about a small village where your causin stayed.... that village, as i remember is hombala ...
if not, it seems i am ageing very fast .....
ha ha...

Meethi Imli said...

Dayanand its not Hombala.. its Hirehandigol, Gadag district.. :)

Dayanand said...

yes it is hirehandogal, i was confused. It proved again that ....