Jun 27, 2011

ಮಳೆಗಾಲದಲ್ಲಿ ಶಿರಸಿಯ (ಉತ್ತರ ಕನ್ನಡ ಜಿಲ್ಲೆ )  ಸೊಬಗು!

 
ಚಿತ್ರ ಕೊಡುಗೆ: ನನ್ನ ಸ್ನೇಹಿತೆ ... :)


Jun 5, 2011

Refrigerator's Revenge!

It was perfect lazy morning, off from work, woke up late. It was the day to purge the home.

Started with soaking my "not so soiled" clothes for washing. Cleaning stuffs here and there and without my realization it was already noon by then. My stomach was growling for food. Started looking out for something in fridge which can be quickly grabbed  and munched on. Luckily found a packet of chikki (candy made out of groundnut and jaggery).  Yummy! I Crumbled a piece and very soon I was onto the last one finishing the entire 70 gms of it, which gave me some 500KCal of energy ( written on the wrapper ;). Now that I was  feeling full, so decided to work on some more and started cleaning my kitchen and cleaned entire house quickly. My sweet  lil house looked impeccably clean with  glittering white tiles. Now am induced to clean my refrigerator as well,  hey wait!said my mind ,orienting  me that am just too tired to take up that task today. Anyways it was not looking that dirty so tried to persuade myself.

As  it was already late noon it would be right thing to start cooking my lunch, so went on digging my fridge  and found some pudina (mint) leaves which looked fresh green. Thought of making some rice out of it would be apt.

The preparation began.... precisely, all i needed now is to grind pudina leaves, fresh coconut with green chillies and ginger. Apparently it was meant for one serving so I envisaged it would fit in small jar of my food processor. When I started to grind, it seemed like i had to grind in two courses. Am super bad at proportioning food stuffs. The mixture wasn't mixing well so accidentally added more water which I was suspecting. Without realizing that ,  I turned the processor on and to my surprise the gravy splashed all over the kitchen, spotting  fridge, my  lovely colorful magnetic buttons, comic magnetic stickers, white floor, white processor, white walls, I got pudina hair pack and face pack together..:) everything around turned "Green"!!!! huh! my Greenpeace magnetic sticker seemed like complimenting my task.. "go green gal", thank God i had removed off that "World Environment Day" sticker few days back, else it would also join Greenpeace's league. All my hard work  so far looked superfluous.. :(


Shrek, Kung-fu panda, Mc'doggy  (all my Mc'D's toy collection) were having fun with green paste splashed on them. My refrigerator was over whelmed, i was wondering why is he looking so joyful! He started to tease me. Saying to me that now you have to clean me as well... all my neighbors looked so clean around except me. Small  soft cushions on sofa and cot, the cute lil soft red toy sitting on the edge of my television  all were jumping in joy to see the messed up kitchen and me.

Then came my  Prince and Princess of Rangeelo Rajasthan with their sword, horses, camels and elephants hung on the windows  ran down from the hall to kitchen to my rescue from this embarrassment and clean up the kitchen. So refrigerator was successful in taking his revenge on me for leaving him uncleaned. Ah! finally ended up winning the battle against  all the mussiness around with my refrigerator by cleaning everything  all over again, befriending with him and  eventually relishing my hot pudina pulav...:)


EOD it was so much fun... ;)



Jun 3, 2011

ತುಂಗಾ ತೀರದಿ...

ತುಂಡು ಬಟ್ಟೆ ತೊಡುವ ತರುಣಿಯರು, ತವಕದಿಂದ ದುಶ್ಚಟಗಳಿಂದ ತತ್ತರಿಸಿ ಹೋಗುತ್ತಿರುವ ತರುಣ-ತರುಣಿಯರ ಕಾಲವಿದು. ಕಲಿಯ ಘೋರ ಪ್ರಭಾವದಿಂದ ಬೇಸತ್ತು ಹೋದ ನಮ್ಮ ಧಾರ್ಮಿಕ ಜನರಿಗೊಂದು ಆಶಾ ಕಿರಣವಾಗಿ ಕನ್ನಡದ ಕಿರುತೆರೆಯ ಮೂಲಕ ಶ್ರೀ ಗುರು ರಾಯರು ಕಾಣಿಸಿಕೊಳ್ಳುತ್ತಿರುವುದು  ನಮ್ಮನ್ನು ಘಾಡ ನಿದ್ರಯಿಂದ  ಎಚ್ಚರಿಸಲು ಬಂದಿದ್ದಾರೆ ಅಂದ್ರೆ ತಪ್ಪಾಗಲಾರದು. ಕಿರುತೆರೆಯಲ್ಲಿ ಧಾರ್ಮಿಕ ಧಾರಾವಾಹಿಗಳು ಮೂಡಿ ಬರುವುದೇನು ಹೊಸದಲ್ಲ ಬಿಡಿ. "ಶ್ರೀ ರಾಮ ಸೀತೆ" ಅಂದರೆ ಅರುಣ್ ಗೋವಿಲ್  ಮತ್ತು ದೀಪಿಕಾ; "ಶ್ರೀ ಕೃಷ್ಣ"  ಅಂದರೆ  ನಿತೀಶ್ ಭರದ್ವಾಜ ಅವರ ಭಾವ ಚಿತ್ರವೇ ಕಣ್ಣ ಮುಂದೆ ಆವರಿಸುವವು. ಹಾಗೆಯೇ ಈಗ "ಶ್ರೀ ಗುರು ರಾಘವೇಂದ್ರ ಸ್ವಾಮಿಗಳೆಂದರೆ " ಪರಿಕ್ಷಿತ್  ಅವರು ಕಾಣುತ್ತಾರೆ.

ಪರಿಕ್ಷಿತ್ - ವೆಂಕಟನಾಥನಾಗಿ  (ರಾಘವೇಂದ್ರ ಸ್ವಾಮಿಗಳ ಪೂರ್ವ ಹೆಸರು)

ಪ್ರತಿನಿತ್ಯ ರಾತ್ರಿ ೧೦:೦೦ ಘಂಟೆ ಆಯಿತೆಂದರೆ "ಶ್ರೀ ರಾಘವೇಂದ್ರ ವೈಭವ" ನೆನಪಾಗುವದು. ಈತ್ತಿಚಿಗಿನ ಎಲ್ಲ TRP Rates ಗೋಸ್ಕರ ಚಿತ್ರೀಕರಿಸಿ  ಏನಾದ್ರು ಪ್ರೇಕ್ಷಕರಿಗೆ ತುರುಕ್ಕುತ್ತಿರುವ ದಿನಗಳಲ್ಲಿ  ವೊಂದು ಪೌರಾಣಿಕ   ಹಾಗು  ಧಾರ್ಮಿಕ ಧಾರವಾಹಿ ತಯಾರಿಸುವದೆಂದರೆ ನಿರ್ಮಾಪಕರಿಗೆ ದೊಡ್ಡ  ಸವಾಲು ಇದ್ದ ಹಾಗೆ. 

ನಾನು ಈ  ಬದುಕಿನ ಹೋರಾಟದಲ್ಲಿ ಆ ಭಕ್ತಿ ಭಾವವನ್ನು ಎಲ್ಲೊ ಕಳೆದುಕೊಂಡ ಹಾಗೆ ಭಾಸವಾಗುತ್ತಿತ್ತು. ಪ್ರತಿನಿತ್ಯ ರಾಯರ ಧಾರಾವಾಹಿಯನ್ನು ನೋಡದಿದ್ದರೆ ಏನೋ ಕಳೆದುಕೊಂಡ ಹಾಗೆ ಆಗುವದು. ನನ್ನ ಈಡಿ ದಿನದ ನೋವನ್ನು ಮತ್ತು ಆಯಾಸವನ್ನು ಮರೆತು ಅರ್ಧ ಘಂಟೆ ನನ್ನಲ್ಲಿ ಸ್ಥಿರತೆ ತಂದುಕೊಡುತ್ತದೆ. ಬಹುಷಃ ನನ್ನಲ್ಲಿ ಇನ್ನು ದೈವ ಭಕ್ತಿ ಉಳಿದುಕೊಂಡಿದೆ ಅನ್ನೋದಕ್ಕೆ ಇದೊಂದು ಅನಸಿಕೆ. ಕಣ್ಣಲಿ ಆನಂದ  ಭಾಷ್ಪ ತುಂಬಿಕೊಂಡೆ ಇದನ್ನು ಬರೆಯುತ್ತಿರುವೆ.

ಹಿಂದಿನ ವಂದಿಷ್ಟು  ಕಂತುಗಳಲ್ಲಿ ವೆಂಕಟನಾಥರ ಸನ್ಯಾಸತ್ವ  ಸ್ವೀಕರಿಸಲು ಆಗದ ಮನಸ್ಸಿನ ತಳಮಳ ನೋಡಿ ನನ್ನ ಮನಸ್ಸು ಬಿಕ್ಕಿ ಬಿಕ್ಕಿ ಅತ್ತಿತ್ತು. ಅಂತಹ ಮಹಾನುಭಾವಿಗಳಿಗೆ ಸಂಸಾರದ ವ್ಯಾಮೋಹ ಬಿಡಲು ಎಷ್ಟು ಕಷ್ಟವಾಗಿತ್ತು ಅಂದರೆ ನಮ್ಮಂಥಹ ಜನ ಸಾಮಾನ್ಯರಿಗೆ  ಅದು ಊಹಿಸಲು ಅಸಾಧ್ಯ.

ನೆನ್ನೆ ಶ್ರೀ ಗುರುಗಳ ಧಾರಾವಾಹಿ ೨೫೦ ಕಂತುಗಳನ್ನ್ನು ಯೆಶಸ್ವಿಯಾಗಿ ಮುಗಿಸಿತು. ಆದರೆ ನಂನು ಯಶಸ್ವಿಯಾಗಿ ಈ ಬ್ಲಾಗ್ಪೋಸ್ಟ್ಅನ್ನು ಬರಿಯಲು ಪ್ರೇರೇಪಿಸಿತು. ಅಂದಹಾಗೆ ನಿನ್ನೆ ಏನ್ ಆಯಿತು ಗೊತ್ತಾ? ಶ್ರೀ ಗುರುಗಳು ಸಂಸಾರಿ ಜೀವನಕ್ಕೆ ವಿದಾಯ ಹೇಳಿ ಸನ್ಯಾಸಿ ಜೀವನ ಸ್ವೀಕರಿಸ್ದ್ರು. ಅಬ್ಬ! ಅದನ್ನ ನೋಡೋಕೆ ಆಗ್ಲಿಲ್ಲ, ನನ್ನ ಕರಳು ಕಿತ್ತಿಧಾಗ್ ಆಯಿತು. ಇಷ್ಟು ದಿನ ನಾನು ನೋಡಿದ ವೆಂಕಟನಾಥ ಇನ್ನ್ಮೇಲೆ ನೋಡುವಂತಿಲ್ಲ. ಹೆಂತಹ ಮಹತ್ತರ ತಿರುವು ಅವರ ಜೀವನದ ಉದ್ದೇಶವನ್ನೇ ಬದಲಿಸಿಬಿಡ್ತು. ಅದೆಲ್ಲ ಸರಿ ನನ್ನ ರೋದನೆ ಅದಕ್ಕಲ್ಲ ಬಿಡಿ, ಅವರ ಪಾಪದ ಹೆಂಡತಿಯ ಆ ತಾಯಿಯ ತ್ಯಾಗ ಅಗಣನಿಯ. ಅವಳ ಸಂಕಟ ನನ್ನನು ಚೂರ್ ಚೂರು ಆಗಿ ಮಾಡಿ ನನ್ನ ಕಣ್ಣೀರಿನಿಂದ ಹೊರ ಹೊಮ್ಮಿತು. ನಾನೇ ಹೋಗಿ ವೆಂಕಟನಾಥರನ್ನು  ತಡೆದು ಬಿಡಲೇ ಅನ್ನೋ ಮಟ್ಟಕ್ಕೆ ಸಂಕಟ ಉದ್ಭವಿಸಿತು. ನನ್ನ ಆ ಕಣ್ಣಿರಿಗೆ  ಕೊನೆ ಮೊದಲಿರಲಿಲ್ಲ. ರಾಯರ "ಸ್ಥಿಥಪ್ರಜ್ಞ್ಯೇಗೆ "  ನಾನು ಮಾರುಹೋಗದೆ ಇರಲು ಆಗಲಿಲ್ಲ. 

ರಾಯರು ತಮ್ಮ ಚಿಕ್ಕ ಕುಟುಂಬ ಬಿಟ್ಟು "ವಸುದೇವ ಕುಟುಂಬಕಂ" ಅಂತ ಇಡಿ ಜಗತ್ತೇ ಅವ್ರ ಕುಟುಂಬ ಅಂತ ಸ್ವೀಕರಿಸಿದರು. ಇದನೆಲ್ಲ ನೋಡುತ್ತಿದ್ದಂತೆ ನನ್ನ ಭಾವನೆಗಳಲ್ಲೇ ದ್ವಂದ್ವ ಆಗಿಹೂಇತು. ಯಾವ್ದು ಸತ್ಯ ಯಾವ್ದು ಸುಳ್ಳು ಅಂತ ನನ್ನ ಮನಸ್ಸು ಹೋಇದಾಡಿತು. ಆದರೆ ಗುರುಗಳು ನಮ್ಮಂಥಹ ಜನಸಾಮಾನ್ಯರಿಗೋಸ್ಕರ ತಮ್ಮ ಜೀವನವನ್ನು ಮುಡುಪಾಗಿಟ್ಟರು ಅಂತ ಅನ್ಸಿದ ಮೇಲೆ ರಾಯರ ಹೃದಯ ವೈಷ್ಯಲತೆ ಬಗ್ಗೆ ನನ್ನ ಚಿಂತನೆ ಹರೆದಾಗ  ಆಹಾ! ಗುರುಗಳ ಅಂಥಕರಣಕ್ಕೆ ಎಲ್ಲೇ ಇಲ್ಲ ಅನಿಸಿತು.  

ಸಕಲ ಕಲಾವಲ್ಲಭರು  ನಮ್ಮ ಗುರುಸಾರ್ವಬಹುಮರು... 
 
 
 ಶ್ರೀ ಕೃಷ್ಣ ನ ಆರಾಧನೆಯಲ್ಲಿ ಮುಳುಗಿದ ನಮ್ಮ ಕಲಿಯುಗದ ಕಾಮಧೇನು  ಕಲ್ಪತರುಗಳು...
 

 ಗುರುಗಳ ಬಗ್ಗೆ ಎಷ್ಟು ಮಾತನಾಡಿದರು ಮುಗಿಯದ ಕಥೆ ಅನಿಸುತ್ತೆ. ಅದೇ ಸಂಜೆ ವಾರ್ತೆಗಳಲ್ಲಿ ಕೆಲವಂದು ಪಾಖಂಡಿ ಬಾಬಾ ಗಳನ್ನು ತೋರಿಸುತ್ತಿದ್ದರು, ಇಂತಹ ಕೆಲವರು ನಮ್ಮ ಭಕ್ತಿಯನ್ನೇ  ಬಲಿ ತೆಗೆದುಕೊಳ್ಳೋದನ್ನ  ನೋಡಿ ಹಿಂಸೆ ಆಯಿತು. ಇದಕ್ಕೂ ಮುಂಚೆ  ಬೇಕಾದಷ್ಟು ಪೊಳ್ಳು ಸ್ವಾಮಿಗಳು ಬಂದದ್ದು ಉಂಟು ಹಾಗೆ ಹೇಳದೆ ಕೇಳದೆ ಮಾಯವಾದದ್ದು ಉಂಟು ಬಿಡಿ. ಆದರೆ ಈ ಎರಡು ದೃಷ್ಯಗಳನ್ನ ನಾನು ವಂದೇ ದಿನ ನೋಡಿದಕ್ಕೆ ಇನ್ನು  ಹೆಚ್ಚು ಪ್ರಭಾವ ನನ್ನ ಮೇಲೆ ಬೀರಿತು ಅನಿಸುತ್ತೆ.

ಧಾರಾವಾಹಿಯ ತಂಡದ ಚಿತ್ರ : ಕೆಳಗಿರುವ ಆ ಪುಟ್ಟ ಹುಡುಗ - ಸೌರಭ ಕುಲಕರ್ಣಿ, ರಾಯರ ಬಾಲ್ಯದ ಕಂತುಗಳಲ್ಲಿ  ಅದ್ಭುತವಾಗಿ ಕಾಣಿಸಿಕೊಂಡ  ಬಾಲಕ. ಲಕ್ಷ್ಮಿ ಹೆಗ್ಡೆ - ರಾಯರ ತಾಯಿಯ ಪಾತ್ರಧಾರೆ. ಬಲಗಡೆಯ ಕೊನೆಯೆಲ್ಲಿ ಪರೀಕ್ಷಿತ - ವೆಂಕಟನಾಥನ ಪಾತ್ರದಲ್ಲಿ. ವಟ್ಟಿನಲ್ಲಿ  ೨೫೦ ಕ್ಕೂ ಹೆಚ್ಚು ಪಾತ್ರಧಾರಿಗಳು ಎಲ್ಲ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಧಾರಾವಾಹಿಯ ತಂಡದವರೆಲ್ಲ ಇದರ ಭಾಗ ಆಗಿದ್ದಕ್ಕೆ ಅತೀವ ಸಂತೋಷ ಹಂಚಿಕೊಂಡರು. ಏಕೆ ಆಗಬಾರದು ಇವರೆಲ್ಲ ಹಿಂತಹ ಪಾತ್ರ ಮಾಡಬೇಕೆಂದರೆ ಪುಣ್ಯ ಮಾಡಿರಲೇಬೇಕು.

ಈ ಧಾರವಾಹಿಯ ತಂಡದ ವಂದು ಚಿಕ್ಕ ಗುಂಪು...
 

ಆ ಭಗವಂತನಿಗೆ ಜಾತಿ, ಕುಲ, ಗೋತ್ರ, ವರ್ಣ, ಲಿಂಗ ಭೇದಗಳಿಲ್ಲ. ಅವನು ಇವೆಲ್ಲವನ್ನು  ಮೀರಿದವನು, ತ್ರಿಗುಣ ರಹಿತನು ಅನ್ನೋದನ್ನ ನಾವು ಮರೆಯ ಬಾರದು. ಬಹಳ ಜನಗಳಿಗೆ ಬಹಳ ಸಂದೇಹಗಳು ಆಕ್ಷೇಪಣೆಗಳು ಈ ಧಾರಾವಾಹಿಯ ಮೇಲೆ ಇರಬಹುದು.ಇನ್ನು ಜನರಲ್ಲಿ ಭಕ್ತಿ ಉಳಿದಿದೆ ಅನ್ನೋದಕ್ಕೆ ಈ ಧಾರಾವಾಹಿಯ ಯಶಸ್ಸೇ ನಿದರ್ಶನ ಅನ್ನಬಹುದು.

ಆದರೆ ಈ ಎಲ್ಲಕ್ಕಿಂತ ನಮ್ಮ ಮನಸ್ಸಿಗೆ ಹತ್ತಿರವಾಗುವ ಹಾಗೆ ನಟಿಸಿರುವ ಕಲಾವಿದರಿಗೆ ಗುರುಗಳ ಅನುಗ್ರವಾಗಿದೆ, ಇವರ ಪ್ರಯತ್ನ ಸಫಲಗೊಂಡಿದೆ ಅಂತ ಅನ್ನೋದ್ರಲ್ಲಿ ಎರಡು ಮಾತ್ ಇಲ್ಲ. ಹೀಗೆ ಈ ಧಾರವಾಹಿ ನಮ್ಮೆಲ್ಲ ಕನ್ನಡಿಗರಲ್ಲದೆ ಇಡಿ ಮನುಕುಲದ ಮನಕ್ಕೆ ಶಾಂತಿ, ನೆಮ್ಮದಿ ತರಲಿ, ಗುರುಗಳ ಕೃಪಾ ಕಟಾಕ್ಷ ನಮ್ಮೆಲ್ಲರನ್ನೂ ಸಲಹುತ್ತಿರಲಿ.

| ಶ್ರೀ ಗುರು ರಾಘವೇಂದ್ರಾಯ ನಮಃ |