Life is not what we think..people say we plan and do things, but nothing works as our plan,everything is predetermined by that Almighty! we are just mere puppets in His hands and dance as per HIS Wish!
Mar 21, 2011
Mar 7, 2011
ಸ್ವಾದಿಯ ಸ್ವಾದ ಸವೀಇರಿ...
ಕೆಲವರಿಗೆ ಗೊತ್ತಿರಬಹುದು ಇನ್ನು ಕೆಲವರು ಕೇಳಿರಬಹುದು ಮತ್ತು ಇನ್ನು ಕೆಲವರು ಕೇಳದಿರಬಹುದು... ಮತ್ತೊಮ್ಮೆ ಪರಿಚಯ ಮಾಡ್ಕೊಳೋದ್ರಲ್ಲಿ ಏನು ತಪ್ಪಿಲ್ಲ ಬಿಡಿ.. :-) ಸ್ವಾದಿ ಒಂದು ಚಿಕ್ಕ ಊರು, ಸಿರಸಿ ತಾಲೂಕಿನ ಒಂದು ಪುಟ್ಟ ಗ್ರಾಮ ಅಂತ ಹೇಳಬಹುದು. ಶ್ರೀ ವಾದಿರಾಜ ಸ್ವಾಮಿಗಳ ಸನ್ನಿಧಾನ. ಬನ್ನಿ ಆ ಪುಣ್ಯ ಕ್ಷೇತ್ರದ ದರುಶನ ಮಾಡೋಣ...
ಮಠದ ಒಂದು ವಿಹಂಗಮ ನೋಟ...



ಹೆಸರೇ ಹೇಳುತ್ತದೆ ಅಲ್ಲವೇ.. ಭೂತ ರಾಜರು ಅಂದರೆ ಸಾಕ್ಷಾತ ಪರಶಿವ...

ಯಾಗ ಶಾಲೆ - ಹೋಮ ಹವನಗಳು, ಮದಿವೆ ಮುಂಜಿಗಳು ನಡಿಯೋ ಸ್ಥಾನ...

ಭಕ್ತರ ಭಕ್ತಿಯ ಬೇಡಿಕೆಯ ಗಂಟುಗಳು...



ಸೇವೆಗೆ ಸಂಕಲ್ಪ ಮಾಡಿಸುತ್ತಿರುವ ಆಚಾರ್ಯರು... ಇವರು ಸಾಮಾನ್ಯರಲ್ಲ.. ಪ್ರತಿನಿತ್ಯ ಪೂಜೆ ಪುನಸ್ಕಾರ ಮಾಡುವದೆಂದರೆ ಸಾಮಾನ್ಯವಾದ ಕೆಲಸವೇ? ಅದಕೆಷ್ಟು ಸಾಧನೆ ಬೇಕು... ಇಷ್ಟು ದೊಡ್ಡ ಮಠದ ಆವರಣವನ್ನು ಸುತ್ತಿ ಪೂಜೆ ಮಾಡೋದಕ್ಕೆ ತಕ್ಕ ದೇಹ ಸಾಮರ್ಥ್ಯನು ಬೇಕು... ಆಚಾರ್ಯರು ಜೊತೆಗೆ ಜೋತಿಷ್ಯ ಶಾಸ್ತ್ರ ಪಂಡಿತರು ಹೌದು...



ದೇವಸ್ಥಾನದ ಒಂದು ವಳನೋಟ...




ಇಲ್ಲಿದೆ ಹೈಗ್ರೀವರ (ಕುದುರೆ ಕಾಲು) ಹಿಂದಿನ ಪಾದ, ಮುಂದಿನ ಎರಡು ಪಾದಗಳು ವಾದಿರಾಜರ ಹೆಗಲ ಮೇಲಿಟ್ಟು ಅವರು ತಯಾರಿಸಿದ ಹೈಗ್ರೀವವನ್ನು ಸೇವಿಸುತ್ತಿದ್ದರು ಎನ್ನಲಾಗಿದೆ..

ಸ್ವರ್ಣವಲ್ಲಿ ಮಠದ ವಳಾಂಗಣ...

ಕೊನೇಯದಾಗಿ ಸಹಸ್ರಲಿಂಗದ ದರ್ಶನವೂ ಆಯಿತು ...

ನನ್ನನು ಮೇಲಿಂದ ಮೇಲೆ ತಮ್ಮ ದರುಶನ ಭಾಗ್ಯ ಕೊಡಲಿ ಎ೦ದು ಗುರುಗಳಲ್ಲಿ ನನ್ನ ಪ್ರಾರ್ಥನೆ... ಈ ಬ್ಲಾಗ್ ಮೂಲಕ ನೋಡೋ ಜನರಿಗೂ ದರುಶನ ಭಾಗ್ಯ ಹಾಗು ಗುರುಗಳ ಆಶೀರ್ವಾದ ಲಭಿಸಲಿ .
- ಹರಿ ಓಂ -
Subscribe to:
Posts (Atom)